Posts

"ಅನುಭವಗಳಿಂದ ಅನುಭಾವದೆಡೆಗೆ"

Image
  "ಅನುಭವಗಳಿಂದ ಅನುಭಾವದೆಡೆಗೆ" ಹುಟ್ಟು ಅಕಸ್ಮಿಕವಾದರೂ.. ಸಾವು ನಿಶ್ಚಿತ, ಈ ನಡುವೆ ಮಾನವನ ಬದುಕು ತೀರಾ ಸರಳವಾಗಿ ಸಾರ್ಥಕವಾಗಬೇಕಾಗಿತ್ತು ಆದರೇ...? ನಾಗರಿಕತೆಯ ಹೆಸರಿನಲ್ಲಿ ಕೆಲವು ಸಮಯ ಸಾಧಕರು ಸೃಷ್ಟಿಮಾಡಿದ ಕಗ್ಗಂಟುಗಳನ್ನೆಲ್ಲ   ಇಂದಿಗೂ ತುಳಿಯುತ್ತಲೇ ಬದುಕಿನ ಸಾರ್ಥಕತೆಯ ಸುಧೀರ್ಘ್ ಹಾದಿ ಸವೆಸಲು ಬಯಸುವ ಮನುಷ್ಯನಿಗೆ ಸದಾಕಾಲ ಒಂದಿಲ್ಲೊಂದು ತೊಡಕು ಎದುರಾಗುತ್ತಲೇ ಇರುತ್ತದೆ. ಅವನ ಅಸಾಯಕತೆ ಹಣವಂತರ ಪಾಲಿಗೆ ಕಾಲೊರಿಸುವ ಚಾಪೆ ಯಾದರೆ...   ಪುರೋಹಿತಶಾಹಿಯ ಪಾಲಿಗೆ ಮೌಢ್ಯ ,ಅಂಧಾನುಕರಣೆಗಳ ದೌರ್ಜನ್ಯದ   ಶಂಕ ಊದಲಿಕ್ಕೆ ಆಸ್ಪದವಾಗಿ ಬಿಟ್ಟಿರುತ್ತದೆ.   ಇದೆಲ್ಲದರ ಮಧ್ಯೆ ಮನುಷ್ಯನನ್ನು ಕಾಡುವ ನೀರು-ಉದ್ಯೋಗ-ಅನ್ನ   ಇನ್ನೂ   ಮುಂತಾದ ಪ್ರಮುಖ ಸಮಸ್ಯೆಗಳ ನಿವಾರಣೆಯ ಕುರಿತು ಜವಾಬ್ದಾರಿಯುತ ನಾಯಕಮಣಿಗಳು   ವೇದಿಕೆಗಳಲ್ಲಿ ಭರ್ಜರಿಯಾಗಿ ಮಾತನಾಡಿ ದೂರ ಸರಿದು ಬಿಟ್ಟಿರುತ್ತಾರೆ.   ಜಾತಿ, ಬಣ್ಣ , ಭಾಷೆ, ವರ್ಗ, ಲಿಂಗಭೇದಗಳ ಕಿರಿಕಿರಿಗಳು ಇವುಗಳಿಂದಾಗಿ ಹುಟ್ಟಿಕೊಂಡು ರಕ್ತ ಕಾರಂಜಿಗಳನ್ನು ನಿರ್ಮಿಸಿ ಮುಗ್ಧ ಜೀವಗಳು ಚೆಂಡಿನಂತೆ ಎಲ್ಲೋ ನಿಸ್ತೇಜವಾಗಿ ಉರುಳಿ ಬಿದ್ದಿರುತ್ತವೆ. ಪರಸ್ಪರ ವೈಷಮ್ಯ, ಅಶಿಸ್ತುಗಳು ಅರಾಜಕತೆಯು ಕವಲುದಾರಿಯನ್ನು ಬದುಕಿನ ಹೆದ್ದಾರಿಯಲ್ಲಿ ಸೃಷ್ಟಿಸಿಬಿಡುತ್ತವೆ.   ಮೌಡ್ಯ, ಡಾಂಬಿಕತೆ, ಅಂಧಾನುಕರಣೆಗಳ ಮೂಲಕ ಅವಿವೇಕವನ್ನು ...