"ಅನುಭವಗಳಿಂದ ಅನುಭಾವದೆಡೆಗೆ"
"ಅನುಭವಗಳಿಂದ
ಅನುಭಾವದೆಡೆಗೆ"
ಹುಟ್ಟು ಅಕಸ್ಮಿಕವಾದರೂ..
ಸಾವು ನಿಶ್ಚಿತ, ಈ ನಡುವೆ ಮಾನವನ ಬದುಕು ತೀರಾ ಸರಳವಾಗಿ ಸಾರ್ಥಕವಾಗಬೇಕಾಗಿತ್ತು ಆದರೇ...?
ನಾಗರಿಕತೆಯ
ಹೆಸರಿನಲ್ಲಿ ಕೆಲವು ಸಮಯ ಸಾಧಕರು ಸೃಷ್ಟಿಮಾಡಿದ ಕಗ್ಗಂಟುಗಳನ್ನೆಲ್ಲ ಇಂದಿಗೂ ತುಳಿಯುತ್ತಲೇ ಬದುಕಿನ ಸಾರ್ಥಕತೆಯ ಸುಧೀರ್ಘ್ ಹಾದಿ
ಸವೆಸಲು ಬಯಸುವ ಮನುಷ್ಯನಿಗೆ ಸದಾಕಾಲ ಒಂದಿಲ್ಲೊಂದು ತೊಡಕು ಎದುರಾಗುತ್ತಲೇ ಇರುತ್ತದೆ. ಅವನ ಅಸಾಯಕತೆ
ಹಣವಂತರ ಪಾಲಿಗೆ ಕಾಲೊರಿಸುವ ಚಾಪೆ ಯಾದರೆ... ಪುರೋಹಿತಶಾಹಿಯ
ಪಾಲಿಗೆ ಮೌಢ್ಯ ,ಅಂಧಾನುಕರಣೆಗಳ ದೌರ್ಜನ್ಯದ ಶಂಕ
ಊದಲಿಕ್ಕೆ ಆಸ್ಪದವಾಗಿ ಬಿಟ್ಟಿರುತ್ತದೆ. ಇದೆಲ್ಲದರ
ಮಧ್ಯೆ ಮನುಷ್ಯನನ್ನು ಕಾಡುವ ನೀರು-ಉದ್ಯೋಗ-ಅನ್ನ
ಇನ್ನೂ ಮುಂತಾದ ಪ್ರಮುಖ ಸಮಸ್ಯೆಗಳ ನಿವಾರಣೆಯ
ಕುರಿತು ಜವಾಬ್ದಾರಿಯುತ ನಾಯಕಮಣಿಗಳು ವೇದಿಕೆಗಳಲ್ಲಿ
ಭರ್ಜರಿಯಾಗಿ ಮಾತನಾಡಿ ದೂರ ಸರಿದು ಬಿಟ್ಟಿರುತ್ತಾರೆ.
ಜಾತಿ, ಬಣ್ಣ , ಭಾಷೆ, ವರ್ಗ, ಲಿಂಗಭೇದಗಳ ಕಿರಿಕಿರಿಗಳು ಇವುಗಳಿಂದಾಗಿ ಹುಟ್ಟಿಕೊಂಡು ರಕ್ತ
ಕಾರಂಜಿಗಳನ್ನು ನಿರ್ಮಿಸಿ ಮುಗ್ಧ ಜೀವಗಳು ಚೆಂಡಿನಂತೆ ಎಲ್ಲೋ ನಿಸ್ತೇಜವಾಗಿ ಉರುಳಿ ಬಿದ್ದಿರುತ್ತವೆ.
ಪರಸ್ಪರ ವೈಷಮ್ಯ,
ಅಶಿಸ್ತುಗಳು ಅರಾಜಕತೆಯು ಕವಲುದಾರಿಯನ್ನು ಬದುಕಿನ ಹೆದ್ದಾರಿಯಲ್ಲಿ ಸೃಷ್ಟಿಸಿಬಿಡುತ್ತವೆ. ಮೌಡ್ಯ, ಡಾಂಬಿಕತೆ, ಅಂಧಾನುಕರಣೆಗಳ ಮೂಲಕ ಅವಿವೇಕವನ್ನು
ಮನುಷ್ಯನ ನರನಾಡಿಗಳಲ್ಲಿ ತುಂಬಿಡುವ ಪುರೋಹಿತಷಾಹಿ,
ಸೂಟು ಬೂಟು, ಕಾವಿ ಖಾದಿಧಾರಿಗಳು ತಮ್ಮೆಲ್ಲ ಸೋಗಲಾಡಿತನವನ್ನು
ಪ್ರದರ್ಶಿಸುತ್ತಲೇ ಪ್ರಖಾಂಡ ಪಂಡಿತರೋ. . ಧೀಮಂತ ನಾಯಕರೋ .. ಜಗದ್ಗುರುಗಳೋ .. ಹೀಗೆ ಏನೇನೋ ಆಗಿಬಿಡುತ್ತಾರೆ. ಅತ್ತ ಸಾಮಾನ್ಯ ಮನುಷ್ಯ ತನ್ನೆಲ್ಲ ಹುಂಬತನ ಗಳಿಂದಾಗಿ ಈ
ಜನರು ಹೆಚ್ಚಿನ ಹುನ್ನಾರಗಳ ಕಿಚ್ಚಿನಲ್ಲಿ ಜೀವಂತ ಸುಟ್ಟು ಕರಕಲಾಗತೊಡಗುತ್ತಾನೆ.
ಇದೇ ರೀತಿ ಈ ಭೂಮಿಯ ಮೇಲೆ ಹುಟ್ಟಿದ ನಾನು ಅನುಭವಿಸಿದ ನೋವುಗಳನ್ನು
ಹೊರಹಾಕಲು ಯತ್ನಿಸಿ ಬದುಕಿನ ಅನುಭವಗಳು ನನ್ನನ್ನು ಅನುಭಾವದೆಡೆಗೆ ಒಯ್ದಿದ್ದನ್ನು "ಅನುಭವಗಳಿಂದ ಅನುಭಾ ವದೆಡೆಗೆ" ಎಂಬ ಶಿರೋನಾಮೆಯ ಸಂಚಿಕೆಯಲ್ಲಿ ದಾಖಲಿಸುತ್ತಿದ್ದೇನೆ.
“ Mystic experience”
Death
is certain, but in the meantime the life of man must have been very simple…?
In
the name of civilization, a person who wants to go through a long path to the
attainment of life will always be a problem, despite all the mess created by
the recipients of sometime. His helplessness is a mat for the moneylender …
leaving no room for honesty, the cruelty of the aristocracy. In the midst of
all this, the heroes of responsibility have kept their talk loudly on the
forums to deal with important issues like water, employment and the still
persecuted man. Crime, color, language, class and gender are shameful, creating
blood fountains where innocent life is rolled like a ball.
Mutual
rivalry and irrationality create chaos at the crossroads of life. Foolishness,
suits, saffron, Khadi, Khadidar are all pundits, while foolishness, arrogance
and stupidity are in the nerves of man. . Dimantha Nayak .. Jagadguru or
something like that. The common man is burned alive in the furnace of most
people on the strength of all his intelligence.
Similarly, in the title "From Experience
to Experience" I am documenting how life experiences have inspired me to
try to overcome the pain that has arisen on this earth.
Comments
Post a Comment